Saturday, August 24, 2013

ಅಣ್ಣನಿಗೊಂದು ಗರ್ಲ್ ಫ್ರೆಂಡ್ ಇರುವುದಾಗಿ ಗೊತ್ತದಾಗಾದ ಆದ ಹೊಟ್ಟೆ ಉರಿ

ನನಗೀಗ ೨0ರ ಆಸು ಪಾಸು ವಯಸ್ಸು,  ವರ್ಷಗಳಲ್ಲಿ ಅಣ್ಣ ಬರಿ ನನಗಷ್ಟೇ ಸೀಮಿತ ಅನ್ನೋ ಭಾವನೆ ಬೆಳೆಸಿಕೊಂಡಿದ್ದೆ. ಬೇರೆ ಇನ್ನ್ಯಾರು ನಮ್ಮಿಬ್ಬರ ಮಧ್ಯ ಬರಲಾರರು ಅನ್ನೋ over confidence ಬೇರೆ, ಅದ್ಯಾವ ಗಳಿಗೆಯಲ್ಲಿ ಇನ್ನ್ಯಾರೋ ಇರುವರು ಅಂತ ಗೊತ್ತಾಯ್ತೋ , ದುಃಖದಲ್ಲಿ ಮುಳುಗಿಹೋಗಿದ್ದೆ .

ಅವಳೇ  ಅನನ್ಯ ಉರ್ಫ್ Angry ಬರ್ಡ್. ಅವಳು ಯಾರು ಏನು ಎಂಥ ಯಾವುದು ಗೊತ್ತಿರದೇ ನಾನು ಪೆಚಾಡಿದ್ದು ಅಷ್ಟಿಷ್ಟಲ್ಲ . ಅದು ಹೇಗೆ ಇವ್ಳು ಇವನಿಗೆ ಇಷ್ಟು ಇಂಪಾರ್ಟೆಂಟ್ ಆದಳು ಅನ್ನೋಕಿಂತ ನನ್ನ ಇಂಪಾರ್ಟೆನ್ಸ್ ಕಡಿಮೆ ಆಗಬಾರದು ಅನ್ನೋ ದುಷ್ಟ ಬುದ್ಧಿ ನನಗೆ. ಬೇರೆ ಎಲ್ಲ ಅಕ್ಕ ತಂಗಿಯರು ತರಹ ಇರುವರೋ ಇಲ್ಲವೋ ನನಗೆ ತಿಳಿಯದು ಆದರೆ ನಾನು ಮಾತ್ರ ಸಿಕ್ಕಾಪಟ್ಟೆ possessive ಅನ್ನೋ ಅರಿವಾಗಿತ್ತು ನನಗೆ. ಅವಳು ಪ್ರತಿ ಸರಿ ಕಾಲ್ ಮಾಡಿದಾಗ ಯಾಕೋ ಏನೋ ವ್ಯಥೆ ಪಟ್ಟಿದ್ದೆ ನಾನು.

ಅಣ್ಣ ನನಗೆ ಬರಿ ಅಣ್ಣನಾಗದೆ  ಬೆಸ್ಟ್ ಫ್ರೆಂಡ್ , ಅಪ್ಪ , ಒಳ್ಳೆಯ ಮಾರ್ಗದರ್ಶಕ ಕೂಡ. ಇನ್ನ್ಯಾರೋ ಬಂದಾಗ ನನಗಾದ ಸಂಕಟ ಕೇಳುವಿರಾ? ನಾನು ಎರಡು ಸರಿ ಕಾಲ್ ಮಾಡಿದಾಗಲು ಬ್ಯುಸಿ ಅಂತ ಬಂದ್ರೆ ನನ್ನನ್ನು ಕಂಟ್ರೋಲ್ ಮಾಡಲು ಬ್ರಮ್ಹನಿಗು ಸಾಧ್ಯವಿಲ್ಲ, ಅದು ಬೇರೆ ಅವಳೇ ಇರುತ್ತಾಳೆ ಅಂತ ಕೋಪ.

ಹೀಗೆ ದಿನ ಕಳೆಯುತ್ತ ಬರುತ್ತಿವೆ, ಅವನು ಮಾತ್ರ ನನ್ನೆದುರಿಗೆ ಏನು ಹೇಳದವ್ನು ಇತ್ತಿಚಿಗೆ ಅವಳ ಬಗ್ಗೆ ಏನೇನೋ ಹೇಳ್ತಿರ್ತಾನೆ. ನಾನು ತಲೆ ಆಡಿಸ್ತಿನಿ, ಇನ್ನೇನು ಮಾಡಕ್ಕೆ ಅಗಲ್ವಲ್ಲ ಅನ್ನೋದಕ್ಕೆಅವಳು ನನಗಾಗಿ ಕಳಿಸಿದ ಕಾಜಲ್ ಮುಟ್ಟೊಕ್ಕೆ ೧೫ ದಿನ ತೊಗೊಂಡಿದ್ದೆ. ಅಂತಹದರಲ್ಲಿ ಅಣ್ಣನಿಗೆ ವಾಲೆಟ್ ಗಿಫ್ಟ್ ಮಾಡಿ ತಪ್ಪು ಮಾಡಿದವಳು ಅವಳು, ಅದು ಯಾಕೆ ಅಂತಿರಾ, ಏನ್ ಕೇಳ್ತಿರಾ ನನ್ನ ಕಥೆ, ಪ್ರೈಮರಿ ಸ್ಕೂಲ್ ಅಲ್ಲಿರ್ಬೇಕಾದ್ರೆ ಅವನಿಗೆ ಜಾತ್ರೆಯಿಂದ ಫಸ್ಟ್ ವಾಲೆಟ್ ತಂದು ಕೊಟ್ಟವಳೆ ನಾನು ಅಲ್ಲಿಂದಾ ಇಲ್ಲಿವರ್ಗು ಅವನು use ಮಾಡೋ ಟಾಮಿ ವಾಲೆಟ್ ನಾನ್ ಸೆಲೆಕ್ಟ್ ಮಾಡಿ ತಂದಿರೋದು.

ಅವಳ ಜೊತೆ ಒಂದು ಸರಿ ಮಾತಾಡಿದಾಗ, ಅವಳು ಪದೇ ಪದೇ ಅವನ ಬಗ್ಗೆ ತನಗಿರುವ ಕಾಳಜಿ ವ್ಯಕ್ತಪಡಿಸಿದಾಗ ಸಿಕ್ಕಾಪಟ್ಟೆ Jealous ಫೀಲ್ ಆಗಿತ್ತು. ದುಃಖದ ಮಡುಗಟ್ಟಿತ್ತು. ಪ್ರಪಂಚದಲ್ಲಿರೋ ಎಲ್ಲ ಕಷ್ಟಗಳು ಸಡನ್ ಆಗಿ ನನ್ನ ತಲೆ ಮೇಲೆ ಬಿದ್ದ ಹಾಗೆ ಆಗಿತ್ತು.                           

ಕಥೆ ಇಲ್ಲಿಗೆ ಮುಗಿಯದು, ಯಾಕಂದ್ರೆ ನನ್ನ ಅಣ್ಣ ತುಂಬಾ ಜವಾಬ್ಧಾರಿ ಇರುವ ವ್ಯಕ್ತಿ, ಯಾವ ಸಮಯದಲ್ಲಿ ಯಾವ ವಿಷಯಕ್ಕೆ ಎಷ್ಟು ಇಂಪಾರ್ಟೆನ್ಸ್ ಕೊಡ್ಬೇಕು ಅನ್ನೋ ಅರಿವು ಇರುವವನು. ಅಷ್ಟನ್ನು ಮೀರಿ ತನ್ನ ಜೀವನ ಹೇಗೆ ನಿರುಪಿಸಿಕೊಳ್ಳಬೇಕು ಅನ್ನುವ ಕಲ್ಪನೆಯೂ ಅವನಿಗಿದೆ. ಮುಂದಿನದನ್ನು ನಾನು ಅರಿಯೆನು, ಆದರೆ ಯಾರೇ ಬಂದರು ನಾನು ಅವನಿಗೆ ಅವನ ಮುದ್ದಿನ ಕೂಸು ಆಗಿದ್ದರೆ ಅಷ್ಟೇ ಸಾಕು. So ಈ  ಅನನ್ಯ ನನ್ನ ಅಮ್ಮನಿಗೆ ಸೊಸೆಯಾಗ್ತಳೊ ಇಲ್ವೋ ಗೊತ್ತಿಲ್ಲ ಆದರೆ ನನ್ನ ಅಣ್ಣನಿಗೆ ಸಮಯಕ್ಕೆ ಸರಿಯಾಗಿ moral ಸಪೋರ್ಟ್ ನೀಡುವ, ಎಲ್ಲ ಆಗು ಹೋಗುಗಳ ಕಾಳಜಿ ತೋರಿಸುವ ಹುಡುಗಿ.

ನನ್ನೆಲ್ಲ ದುಃಖ, ವ್ಯಥೆ, possessiveness ಮತ್ತು ಸಿಟ್ಟು ಒಂಥರಾ ಸಣ್ಣ ಮಕ್ಕಳ ಬುದ್ಧಿ ಹಾಗೆ. ಯಾವುದು ಅರ್ಥ ಮಾಡಿಕೊಳ್ಳದೆ ನಾ ಮಾಡುವ ತಪ್ಪುಗಳು. ಎರಡನೇ ಯೋಚನೆಯೇ ಮಾಡಲಾರದ ಮೂರ್ಖಿ ನಾನು.



ಅಣ್ಣ ಮಾತ್ರ ಅರ್ಧದಲ್ಲಿ ಹಂಚಿ ಹೋಗಿದ್ದಂತೂ ನಿಜ.