ಮಹಾ ಶಿವರಾತ್ರಿ ಶಿವನ ಭಕ್ತಿಗೆ ಮೀಸಲಾಗಿರುವ ದಿನ. ನನ್ನ ಧರ್ಮದಲ್ಲಿ ಇದೊಂದು ದೊಡ್ಡ ಹಬ್ಬ. ನಮ್ಮ ಕುಟುಂಬದ ಸದಸ್ಯರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ. ಪದ್ದತಿಯ ಪ್ರಕಾರ ನಾವು ಒಗ್ಗೂಡಿ ಉಪವಾಸ ಕೈಗೊಂಡು ಶಿವ ಪಾರ್ವತಿಯ ಪೂಜೆ ಮಾಡಿದೆವು . 16 ಶಿವ ಲಿಂಗ ತಯಾರಿಸಿ ಶಿವ ನಾಮ ಪಠಣ ಮಾಡಲಾಯಿತು. ಸಹಜವಾಗಿ, ನಾನು ಕೂಡ ಇದರಲ್ಲಿ ಭಾಗಿಯಾಗಿದ್ದೆ ಜೊತೆಗೆ ವರ್ಕ್ ಫ್ರಮ್ ಹೋಂ ಬದಲಿಗೆ ವರ್ಕ್ ಫ್ರಮ್ ಹುಬ್ಬಳ್ಳಿ ಅಂತ ಆಫೀಸ್ ಕೆಲಸ ಮಾಡ್ತಿದ್ದೆ.
ಇವತ್ತು ನಾನು ಮರಳಿ ನನ್ನ ಕರ್ಮ ಭೂಮಿ (ಬೆಂಗಳೂರು) ಎಡೆಗೆ ಪ್ರಯಾಣಿಸಬೇಕು. ಮನೆಯಿಂದ ಹೊರಡುವ ಸಮಯ ಸಮಿಪಿಸುತ್ತಿತು, ನಾನು ಇನ್ನೂ ಮನೆಯಲ್ಲಿ ಅಲ್ಲಿ ಇಲ್ಲಿ ಓಡಾಡುತ್ತಿದ್ದೆ. ನಾನು ನನ್ನ ಅಣ್ಣ ಗಂಭೀರ ಮಾತುಕತೆಯಲ್ಲಿ ತೊಡಗಿದ್ದೆವು. ಮಾತಿನ ನಡುವೆ ಮನೆಯಿಂದ ಬಸ್ ನಿಲ್ದಾಣಕ್ಕೆ ಹೊರಡುವ ಸಮಯವಾದ ಅರಿವೇ ಇರಲಿಲ್ಲ. ಅದಾಗಲೇ ತಡವಾಗಿತ್ತು, ಆದರು ನಾನು ಬಸ್ ಏರುವ ತನಕ ನಾವು ಮಾತನಾಡಬಹುದು ಅಂದುಕೊಂಡೆ. ಹೀಗೆ ಮಾತನಾಡುವಾಗ ನಮ್ಮ ಸಂಭಾಷಣೆ ನಯವಂಚಕರು ಎಂಬ ವಿಷಯದ ಮೇಲೆ ನಡೆದಿತ್ತು. ನಮ್ಮ ಪರಿಚಯಸ್ಥರ ಬಗ್ಗೆ ಮಾತನಾಡುವಾಗ ಎದೆ ಗುಂದಿದ್ದೆ. ನಮ್ಮೆಲ್ಲರ ಮಧ್ಯೆ ಎಂಥೆಂಥಹ ಜನರು ಇರುವರು ಎಂಬ ಯೋಚೆನೆಯಲ್ಲಿದ್ದೆ. ಈ ವಿಷಯದ ಬಗ್ಗೆ ನಾನು ಪ್ರತಿಕಿಯಸದೆ ಇರಲು ಸಾಧ್ಯವಾಗಲಿಲ್ಲ.
ನಯವಂಚಕರು ಎಂಬ ವಿಷಯದಿಂದ ಸಂಭಾಷಣೆ ಬದಲಾಯಿಸಲು, ನಾನು ನನ್ನ ತಾಯಿ 'ಮಾತೆ ಮಹಾದೇವಿ (ಪಾರ್ವತಿ ದೇವಿಯ ಇನ್ನೊಂದು ಹೆಸರು)' ಬಗ್ಗೆ ಮಾತನಾಡಲು ಆರಂಭಿಸಿದೇನು. ನಾವಿಬ್ಬರು ಹಬ್ಬದ ದಿನ ಅಮ್ಮನೊಂದಿಗೆ ಮನೆಯಲ್ಲಿರುವುದು ಅಮ್ಮನಿಗೆ ಖುಷಿ ತಂದಿರುವಂತೆ ಅನಿಸುತ್ತಿದೆ ಅಂದೆ. ಅಣ್ಣನದು ಕೂಡ ಅದೇ ಅಭಿಪ್ರಾಯವಾಗಿತ್ತು. ಮನೆಯಿಂದ ಹೊರಡುವ ಸಮಯವಾದಾಗ ಅಮ್ಮನ ಜೊತೆ ಇನ್ನು ಏನೋ ಮಾತನಾಡಲು ಇರುವಂತೆ ಭಾಸವಾಯಿತು, ಅದೇನೆಂದು ಅರಿಯದೆ ಮನೆಯಿಂದ ಬಸ್ ಸ್ಟಾಂಡ್ ಗೆ ಹೊರಟೆ.
ಹುಬ್ಬಳ್ಳಿ ಬಸ್ ಸ್ಟಾಂಡ್ ನ ಪ್ರತಿಕ್ಷಣಾ ಕೊಟಡಿಯಲ್ಲಿ ಕುಳಿತು ನನ್ನ ಬಸ್ ಗಾಗಿ ಕಾಯುತಿದ್ದೆ. ಮತ್ತೆ ನಾನು ಅಣ್ಣ ಗಂಭೀರ ಮಾತುಕತೆಯಲ್ಲಿ ತೊಡಗಿದೇವು. ಹಠಾತ್ ನೆ ಮಾತೆ ಮಹಾದೇವಿಯವರು ಕಾಣಿಸಿಕೊಂಡರು. ಈ ಬಾರಿ ಅವರು ನನ್ನ ತಾಯಿ ಮಹಾದೇವಿಯವ್ರು ಆಗಿರಲಿಲ್ಲ, ಒಂದೂವರೆ ವರುಷದ ಮುದ್ದಾದ ಹೆಣ್ಣು ಮಗುವಿನ ಮುಗ್ದ ತಾಯಿ. ಅವರನ್ನು ಕಂಡ ಒಡನೆ ನಾನು ಅಣ್ಣನ ಎಡೆಗೆ ತಿರುಗಿ ಹೇಳಿದೆ, ಏ ಅಣ್ಣ ಅವರು ನನಗೆ ಗೊತ್ತು ಕಣೋ. ನಮ್ಮಣ್ಣ : ನಿನಗ್ಯಾರು ಗೊತ್ತಿರದೇ ಇರುವವರು ಹೇಳು? ಅಷ್ಟರಲ್ಲಿ ೩೦ರ ಆಸು ಪಾಸಿನ ಯುವಕನೊಬ್ಬ ಅವರ ಕೈಯಿಂದ ಮಗುವನ್ನು ತೆಗೆದುಕೊಂಡರು. ಶ್ರೀಮತಿ ಮಹಾದೇವಿಯವರು ನನ್ನ ಎದುರಿನ ಕುರ್ಚಿಯಲ್ಲಿ ಕುಳಿತುಕೊಂಡರು. ವಿನು ನನಗವರು ನಿಜವಾಗಲು ಗೊತ್ತು ಎಂದೆ.
ವಿನು: ಯಾರವರು ?
ನಾನು : ಶ್ರೀಮತಿ ಕೊಪ್ಪದ್. ಸಿಯಾಚಿನ್ ಹನುಮಂತಪ್ಪನವರ ಹೆಂಡತಿ. ನೆನಪಿದೆಯಾ?
ವಿನು : Are you sure ?
ನಾನು: ಹೌದು ೧೦೦ %.
ಅಣ್ಣ ತನ್ನ ಫೋನ್ ಪಕ್ಕಕ್ಕೆ ಇಟ್ಟು ಅವರ ಕಡೆ ತಿರುಗಿ ನೋಡಿದ. ಆ ಮಗುವನ್ನು ತೋರಿಸಿ ಹೇಳಿದೆ - ಆ ಪುಟ್ಟಿ ನ ನ್ಯೂಸ್ ಚಾನೆಲ್ ನಲ್ಲಿ ನಾನು ನೋಡಿದ್ದೀನಿ. ಪಕ್ಕಾ ಅವ್ರೆ ಇವರು ಎಂದೆ. ನಾನು ಅವರ ಜೊತೆ ಮಾತನಾಡಬೇಕು ಎಂದಾಗ ನನ್ನ ಅಣ್ಣ ಗಲಿಬಿಲಿಯಾದ. ಅವರ ಭಾವನೆಗಳಿಗೆ ದಕ್ಕೆ ಆಗುವುದು, ಕೋಲಾಹಲಕ್ಕೆ ಎಡೆ ಮಾಡಬೇಡ ಎಂದ. ಸರಿ ಎಂದು ಕೊಟಡಿಯ ಬೇರೆ ದಿಕ್ಕಿನೆಡೆಗೆ ನೋಡುತ್ತಾ ಕುಳಿತೆ. ನನ್ನನ್ನು ನಾನೆ ಸುಮ್ಮನಿರಲು ಮನವರಿಸಿಕೊಂಡೆ. ಅದಾಗಲೇ ಭಾಷ್ಪವೊಂದು ಕೆನ್ನೆಯ ಕೆಳಗೆ ದಾರಿ ಹುಡುಕುತಿತ್ತು. ಮುಂದಿನ ಒಂದು ವಾರ ನಾನು ಇದೆ ಗುಂಗಿನಲ್ಲಿರುವೆ ಎಂದು ನನಗೆ ಖಾತ್ರಿ ಆಗಿತ್ತು. ನನ್ನ ಎದೆಯಲ್ಲಿ ಒಂದು ತರಹದ ನಡುಕ. ಏನೇನೋ ಯೋಚನೆಗಳು. ಮಗುವಿನ ಮುಖ ನೋಡಿ ದುಃಖ ತಡಿಯಲಾಗಲಿಲ್ಲ. ೧೦ ನಿಮಿಷಗಳ ಕಾಲ ಸುಮ್ಮನಿದ್ದೆ. ಯಾವುದೇ ಮೂರ್ಖತನ ಮಾಡಿ ಅವರಿಗೆ ದುಃಖವಾಗದಿರಲಿ ಎಂದು ಮನವರಿಸಿಕೊಳ್ಳುತಿದ್ದೆ.
ಸುಮಾರು ೧೦ ನಿಮಿಷದ ಅವಧಿಯಲ್ಲಿ ನನ್ನ ಬಸ್ ಬಂತು. ಹೊರಡಲು ನನ್ನ ಬ್ಯಾಗ್ ತೆಗೆದುಕೊಂಡು ಸಿದ್ದವಾದೆ. ಕೊನೆಗೂ ಮನಸು ತಡಿಯಲಾಗಲಿಲ್ಲ. ವಿನು ನಾನವರ ಜೊತೆ ಮಾತನಾಡಲೇ ಬೇಕು ಎಂದೆ. ಸರಿ ಎಂದು ಒಪ್ಪಿಕೊಂಡ ಅಣ್ಣ.
ನಾನು: ನೀವು ಮಹಾದೇವಿಯವ್ರು ಅಲ್ಲಾ ?
ಮಹಾದೇವಿಯವ್ರು : ಹೌದು ರೀ
ನಾನು ಮತ್ತು ಅಣ್ಣ : ನಮಸ್ಕಾರ ರೀ (ಶಿರ ಬಾಗಿ)
ಮಹಾದೇವಿಯವ್ರು : ನಮಸ್ಕಾರ ರೀ.
ನಾನು : ಅಕ್ಕಾರ ಹೆಂಗದಿರಿ?
ಮಹಾದೇವಿಯವ್ರು : ನಾನ್ ಆರಾಮ್ ಅದಿನಿ ರೀ.
ನಾನು: ಮಗಳು ಹೆಂಗ್ ಅದಾಳರಿ ?
ಮಹಾದೇವಿಯವ್ರು : ಅಕಿನು ಆರಾಮ್ ಅದಾಳರಿ .
ನಾನು : ಇವ್ರು ನಿಮ್ ತಾಯಿಯವರು ಏನ್ರಿ ?
ಮಹಾದೇವಿಯವ್ರು : ಇವ್ರು ನಮ್ಮ ಅಜ್ಜಿ ಅವ್ರು.
ನಾನು: ಊರಿಗೆ ಹೊಂಟಿರೆನು ?
ಮಹಾದೇವಿಯವ್ರು : ಬೆಂಗಳೂರಿಗೆ ಹೊಂಟೆವ್ರಿ ಕೆಲಸದ ಮ್ಯಾಲೆ.
ನಾನು ಮತ್ತು ಅಣ್ಣ: ಓ ಹೌದೆನ್ರಿ.
ಅಣ್ಣ ಗಡಿಬಿಡಿಯಲ್ಲಿ ತನ್ನ ಬಿಸಿನೆಸ್ ಕಾರ್ಡ್ ಹುಡುಕಾಡ ತೊಡಗಿದ. ಮಹಾದೇವಿ ಅವರಿಗೆ ಏನು ಅರ್ಥ ವಾಗಲಿಲ್ಲ. ಅವ್ರು ಮುಗ್ದವಾಗಿ ನಮ್ಮ ಎಡೆಗೆ ನೋಡುತಿದ್ದರು. ನಾನು ಆ ಕಾರ್ಡ್ ಅನ್ನು ಅವರಿಗೆ ಕೊಟ್ಟೆ. ಅಣ್ಣ ಹೇಳಿದ " ಅಕ್ಕಾರ ಮಗಳ ಶಿಕ್ಷಣದ ವಿಚಾರವಾಗಿ ಯಾವಾಗಾದ್ರೂ ಫೋನ್ ಮಾಡ್ರಿ, ಬಿಡೆ ಮಾಡ್ಕೊಬ್ಯಾಡ್ರಿ ನಾನ್ ಅಕಿನ್ ಮಾಮಾ ಇದ್ದಂಗ. ಎನರ ವಿಚಾರ ಇರ್ಲಿ ಒಂದ ಫೋನ್ ಮಾಡ್ರಿ." ಮುಗ್ದ ಮುಖದಿಂದ ಮೊದಲ ನಗು ಕಾಣಿಸಿತು. ಅವರು ಥ್ಯಾಂಕ್ಸ್ ರೀ ಅಣ್ಣಾರ ಎಂದಾಗ. ಅಣ್ಣಾ ಮುಂದುವರೆಸಿದ ಇಕಿ ನನ್ ತಂಗಿ ಬೆಂಗಳೂರು ಒಳಗ ಇರ್ತಾಳ. ಅವರಿಗೆ ನಾನ್ ಅಂದೇ ಅಕ್ಕಾರೆ ಬೆಂಗಳೂರ್ ಒಳಗ ನಿಮಗ ಏನ್ ಬೇಕಾದರು ಒಂದ ಫೋನ್ ಮಾಡ್ರಿ, ನಮ್ ಕೈಯೋಳಗ್ ಆಗಿದ್ದು ಮಾಡ್ತ್ಹೇವಿ. ಅಕ್ಕನವರು ಮುಗ್ದತೆಯ ಮಂದಹಾಸ್ ಬೀರಿದರು.
ಅವರು ಭಾವುಕರಗುವಂತೆ ಭಾಸವಾಯಿತು. ನಾನು ಮತ್ತು ಅವರ ಅಜ್ಜಿ ಅದಾಗಲೇ ಕಣ್ಣಿರ ಭಾಷ್ಪ ಹರಿಸುತ್ತಿದ್ದೆವು. ಅಕ್ಕನವರು ಪ್ರಭಲವಾಗಿಯೇ ಪರಿಸ್ಥಿತಿ ಎದುರಿಸುತ್ತಿದ್ದರು. ಆದರು ಅವರನ್ನು ದುರ್ಬಲರಾಗಿಸಲು ನನ್ನ ಮನಸ್ಸು ಒಂಚೂರು ಒಪ್ಪುತಿರಲಿಲ್ಲ. ಸರಿ ನಾನ್ ಇನ್ನು ಹೊರಡುವೆ ಎನ್ನುತಿರಲು ಮುದ್ದು ಮರಿ ಅವರ ಮಗಳು ಕೈಯಲ್ಲಿ Lays ಪ್ಯಾಕೆಟ್ ಹಿಡಿದುಕೊಂಡು ಒಳಗೆ ಬಂದಳು. ಮಗುವನ್ನು ಮುದ್ದಾಡಿ ಅವಳನ್ನು ಬಿಟ್ಟು ಹೋಗಲು ಒಂಚೂರು ಮನಸಿರಲಿಲ್ಲ. ಆದರು ಕಾಳಜಿ ತೊಗೊಳ್ರಿ ಅಂತ ಹೇಳಿ ಹೊರಟೆ.
ಈಗ ಅನಿಸಿತು, ಇನ್ನು ಏನೋ ಮಾತನಾಡಬೇಕು ಅಂದುಕೊಳ್ಳುತಿದ್ದ ಮನಸು ಈಗ ಸಂಪೂರ್ಣವೆನಿಸಿತು. ಮಹಾ ಶಿವರಾತ್ರಿಯ ದಿನ ಮಹಾದೇವಿಯವರನ್ನು ಬೆಟ್ಟಿಯಾಗಿದ್ದು ನನ್ನ ಭಾಗ್ಯವೇ ಎನ್ನಬಹುದು. ಅವರೊಬ್ಬ ಕೆಚ್ಚೆದೆಯ ಮಹಿಳೆ. ಮಹಾತಾಯಿ. 'ಮಗಳಲ್ಲ ಮಗನ ಹಾಗೆ ಬೆಳೆಸುವೆ ಇವಳನ್ನ' , 'ನಮ್ಮವರು ಮರಳಿ ಬರುವರು ಎಂದು ಇಡಿ ಊರೇ ಹಬ್ಬ ಮಾಡಿತ್ತು' ಎಂದ ಅವರ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತಿದ್ದವು.
ಬಾಗಿಲ ಬಳಿ ಬಂದು ಕೈ ಬಿಸಿ ವಿಧಾಯ ಹೇಳಿದೆ, ಅದಕ್ಕವರು ತಮ್ಮ ದುಃಖದಲ್ಲಿಯೂ ಮರಳಿ ಮಂದಹಾಸ್ ಬಿರಿ ವಿಧಾಯ ಹೇಳಿದರು. ನೋವಿನಲ್ಲಿಯು ನಗುವ ಅವರ ನಡುವಳಿಕೆ ಜೀವನವಿಡಿ ನೆನಪಿಟ್ಟುಕೊಳ್ಳುವಂತಹ ಒಂದು ಪಾಠ. ದೇಶದ ಹೆಮ್ಮೆಯ ಮಗಳು ಇವರು. ದೇಶವು ಇವರೆಡೆಗೆ ತಮ್ಮ ಜವಾಬ್ದಾರಿ ಅರಿತುಕೊಂಡರೆ ಅದೇ ಹನುಮಂತಪ್ಪನವರಿಗೆ ನಾವು ಕೊಡುವ ಗೌರವ.
ಒಂದು ಚಿಕ್ಕ ಭೇಟಿ ಕೊನೆಯವರೆಗೂ ನೆನಪಿಟ್ಟುಕೊಳ್ಳುವಂತಹ ದಿನ. ಇವರೊಬ್ಬ ಮಹಾನ್ ವ್ಯಕ್ತಿ, ಮಗಳನ್ನು ಸೇನೆಗೆ ಕಳಿಸುವ ಕನಸು ಕಟ್ಟಿ ಸಾಗುತ್ತಿರುವ ಮಹಿಳೆ. ಶ್ರೀ ಹನುಮಂತಪ್ಪನವರಿಗೂ ಮತ್ತು ಮಹಾದೇವಿಯವ್ರಿಗೂ ತಲೆಬಾಗಿ ನನ್ನ ನಮನ, ಪುಟ್ಟ ಕಂದಮ್ಮಳಿಗೆ ನನ್ನ ಸಿಹಿ ಮುತ್ತುಗಳು.
- ವಿಜೇತಾ
Note: This has already been published in English. To bring in the effect of conversations, I have translated this into my mother tongue "Kannada"